ಬಿಬಿಎಂಪಿಯ ನಿರ್ಲಕ್ಷ್ಯ ಹೇಳತೀರದು.. ಕುಮಾರಸ್ವಾಮಿಲೇಔಟ್‍ನ ಚಂದ್ರಾನಗರದಲ್ಲಿ ಕರಿಮಾರಿಯಮ್ಮ ರೋಡ್‍ನಲ್ಲಿ ಬೃಹತ್ ಮೋರಿಯ ಕಾಮಗಾರಿ ಮಂದಗತಿಯಲ್ಲಿ ಸಾಗ್ತಿದೆ. ರಸ್ತೆ, ಮನೆ ಮುಂದೆಯೇ ಕಾಮಗಾರಿಗಾಗಿ ಅಗೆದ ಚಪ್ಪಡಿ ಕಲ್ಲು, ಕಾಂಕ್ರೀಟ್ ತ್ಯಾಜ್ಯಗಳನ್ನು ಅಲ್ಲೇ ಬಿಡಲಾಗಿದೆ. ಇದರಿಂದ, 200ಕ್ಕೂ ಅಧಿಕ ಕುಟುಂಬಗಳಿಗೆ ಕಿರಿಕಿರಿ ಆಗ್ತಿದೆ. 2-3 ದಿನದಲ್ಲಿ ಎಲ್ಲಾ ತೆಗೆದು ಹಾಕ್ತೇವೆ ಅಂತ ಕಾಮಗಾರಿ ಶುರುಮಾಡಿದ ಬಿಬಿಎಂಪಿ, ತಿಂಗಳಾದರೂ ತೆರವು ಮಾಡಿಲ್ಲ. ಇದರಿಂದ ಜನರಿಗೆ ಓಡಾಡಲೂ ಆಗ್ತಿಲ್ಲ. ವಾಹನಗಳು ಇದ್ದರೂ ಬಳಸಲಾಗದ ಪರಿಸ್ಥಿತಿ. ಮೋರಿ ಓಪನ್ ಇರೋದ್ರಿಂದ ಚಿಕ್ಕ ಮಕ್ಕಳು, ವೃದ್ಧರು ಮಹಿಳೆಯರು ಮೋರಿ ದಾಟಲು ಸಾಧ್ಯವಾಗ್ತಿಲ್ಲ. ಮೋದಿ ಮೇಲೆ ರಟ್ಟು ಹಾಕಿ ಓಡಾಡಲಾಗ್ತಿದ್ದು, ಕೆಲವರು ಗಾಯಗೊಂಡಿದ್ದಾರೆ. ಕಾಮಗಾರಿ ವೇಳೆ ಮೋರಿ ಪಕ್ಕದಲ್ಲಿ ಇದ್ದ ಮನೆಗೆ ಜೆಸಿಬಿ ಟಚ್ ಆಗಿ ಮನೆ ಬಿರುಕು ಕೂಡ ಬಿಟ್ಟಿದೆ.
#HRRanganath #NewsCafe #PublicTV #BBMP